ಕಲ್ಪಸಿರಿ ಶಟ್ಲ್ ಕ್ಲಬ್‍ನ ವಾರ್ಷಿಕೋತ್ಸವ – ಕಲ್ಲಮುಂಡ್ಕೂರು

ತಾರೀಕು 20-08-2017ನೇ ರವಿವಾರದಂದು ಮಧ್ಯಾಹ್ನ 2 ಗಂಟೆಗೆ ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಶ್ರೀಧರ ಪಡಿವಾಳ್ ಸಭಾಂಗಣದಲ್ಲಿ ಕಲ್ಪಸಿರಿ ಶಟ್ಲ್ ಕ್ಲಬ್ ಇದರ 3ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಸಹಯೋಗದೊಂದಿಗೆ ಅದ್ದೂರಿಯಾಗಿ ನಡೆಯಿತು. ಇದರ ಸಲುವಾಗಿ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಪಸಿರಿ ಶಟ್ಲ್ ಕ್ಲಬ್‍ನ ಅಧ್ಯಕ್ಷರಾದ ಶ್ರೀಯುತ ಜೋಕಿಂ ಕೊರೆಯ, ಉದ್ಘಾಟಕವಾಗಿ ಕಲ್ಲಮುಂಡ್ಕೂರು ವ್ಯಸಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ. ಕೆ. ವರದರಾಯ ಕಾಮತ್, ಮುಖ್ಯ ಅತಿಥಿಗಳಾಗಿ ಸರ್ವೋದಯ ಪ್ರೌಢ ಶಾಲೆಯ ಸಂಚಾಲಕರಾದ ಶ್ರೀಯುತ ಜಯಪ್ರಕಾಶ್ ಪಡಿವಾಳ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶ್ರೀ. ಕೆ. ಶ್ರೀಕಾಂತ್ ರಾವ್ ಹಾಗೂ, ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘ ಕಾರ್ಯ ನಿರ್ವಹಣಾಧಿಕಾರಿಯಾದ ಶ್ರೀ ನಾರಾಯಣ ಮೂರ್ತಿ, ಹಳೇನೀರು ಉಪಸ್ಥಿತರಿದ್ದರು. ಕಿನ್ನಿಗೋಳಿ ಲಯನ್ಸ್ ಕ್ಲಬ್‍ನ ಅಧ್ಯಕ್ಷೆ ಮತ್ತು ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕಿಯಾದ ಶ್ರೀಮತಿ. ಶಾಂಭವಿ ಎಸ್. ಶೆಟ್ಟಿ ಮತ್ತು ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಹಾಲಿ ನಿರ್ದೇಶಕರಾದ ಶ್ರೀ ಜಗತ್ಪಾಲ ಭಂಡಾರಿ ಇವರು ಶುಭಾಶಂಸನೆಗೈದರು. ಕಾರ್ಯಕ್ರಮದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಕಾಷ್ಠ ಶಿಲ್ಪಿ ನಾರಾಯಣ ಆಚಾರ್ಯ, ಕಲ್ಲಮುಂಡ್ಕೂರು ಹಾಗೂ ಹಿರಿಯ ಸಂಗೀತ ಕಲಾವಿದರಾದ ಎಮ್. ತಿಮ್ಮಪ್ಪ ಸುವರ್ಣ, ಅರಿಯಾಳ ಇವರನ್ನು ಸನ್ಮಾನಿಸಲಾಯಿತು. ಕೆ. ನಾಗರಾಜ್ ಕಾಮತ್, ಸ್ವಾಗತಿಸಿ, ಗುರು ಎಂ.ಪಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಯುತ ಅರುಣ್ ಕುಮಾರ್ ಬಹುಮಾನಿತರ ಪಟ್ಟಿಯನ್ನು ವಾಚಿಸಿ, ಶ್ರೀಮತಿ ದೀಪಾ ಅರುಣ್ ಕುಮಾರ್ ವಾರ್ಷಿಕ ವರದಿಯನ್ನು ಮಂಡಿಸಿದರು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಸಂಗೀತ ಸಂಭ್ರಮ 2017 ಕಾರ್ಯಕ್ರಮದಲ್ಲಿ ಮೂಲ್ಕಿ ಶ್ರೀ ರವೀಂದ್ರ ಪ್ರಭು ಮತ್ತು ಬಳಗದವರು ಸಂಗೀತ ಸುಧೆಯನ್ನು ಹರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಸಂಘಟಕರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಕಲ್ಪಸಿರಿ ಶಟ್ಲ್ ಕ್ಲಬ್‍ನ ಸರ್ವ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

« 1 of 2 »

Number of viewers: 214

Author: Niddodi Church